Shraddha Bhatt
ನಾನು ಹೇಗಿರಬೇಕು, ಹೇಗೆ ಬದುಕಬೇಕು? ಹೀಗೆ ಬದುಕಿದರೆ ಅದು ಸರಿಯಾದ ರೀತಿಯಾ? ಹೀಗೆ ಬದುಕಿದರೆ ಜಗತ್ತಿನ ಎಲ್ಲಾ ಮನ್ನಣೆಗೆ ಸಿಗಬಹುದಾ? ನಾನು ಹೀಗೆ ಮಾತಾಡಿದ್ದು ಅವರಿಗೆ ಬೇಸರವಾಗಿರಬಹುದಾ? ಅವರು ಅಷ್ಟೆಲ್ಲಾ ಮಾತನಾಡಿದರು ನಾನು ಯಾಕೇ ಸುಮ್ಮನಿರಬೇಕು? ನಾನು ಏನಾದರು ಹೇಳಿದರೆ ಅವರು ನನ್ನನ್ನು Judge ಮಾಡಬಹುದಾ? ನಾನು ಮನಸ್ಸಿಗೆ ಅನ್ನಿಸಿದ್ದನ್ನು ಹೇಳಿದರೆ ಉದ್ದಟತನ ಎಂದು ಅನ್ನಿಸಿಕೊಳ್ಳಬಹುದಾ? ನಾನು ಹೇಗಿದ್ದರೆ ಸಮಾಜದ ಪ್ರಕಾರ ಸರಿ? ನಾನು ಎಲ್ಲರಿಗೂ ಇಷ್ಟವಾಗಲೇಬೇಕಾ? ಯಾರೋ ನನ್ನ ಬಗ್ಗೆ ಮಾತನಾಡಿದರೆ, ಅದು ನನಗೆ ಗೊತ್ತಾದರೆ ನನಗೆ ಎಷ್ಟು ನೋವಾಗಬಹುದು? ಎಲ್ಲರಿಗೂ ಸಮಾಧಾನವಾಗುವಂತೆ ಬದುಕುವುದು ಸಾಧ್ಯವಾ? ಅವರನ್ನು Impress ಮಾಡುವುದು ಹೇಗೆ? ಇವರನ್ನು ದೂರ ಮಾಡುವುದು ಹೇಗೆ? ಕಷ್ಟವಾದಾಗ ಅದನ್ನು ಹೇಳಿಕೊಂಡರೆ ನನ್ನನ್ನು weak ಎಂದುಕೊಳ್ಳಬಹುದಾ? ಅಳು ಬಂದಾಗ ಎಲ್ಲರ ಕಣ್ಣನ್ನು ಮರೆಮಾಚಿಯೇ ಅಳಬೇಕಾ? ಸರಿಯಾಗಿ ಬದುಕುವ ರೀತಿ ಯಾವುದು? I don’t care attitude ಲ್ಲಿ ಬದುಕುವುದು ಸರಿಯಾ?
ಪ್ರತಿದಿನ ಹೀಗೆ ಮುಗಿಯದಷ್ಟು ಪ್ರಶ್ನೆಗಳ ನಡುವೆ ಕಳೆದು ಹೋಗುತ್ತೇವೆ ನಾವು. ನಾವು ಮನುಷ್ಯರು ನಮ್ಮ ಬದುಕಿಗೆ Approval ಗಾಗಿ ಕಾಯುತ್ತೇವೆ. ಯಾರೋ ಅದನ್ನು ಅಲ್ಲಗೆಳೆದರೆ ನಮಗೆ ಅದನ್ನು ಸಹಿಸುವ ಶಕ್ತಿ ಇರುವುದಿಲ್ಲಾ. ಅದರಲ್ಲೂ ನಾವು ಹೆಣ್ಣು ಮಕ್ಕಳಂತೂ ಸಮಾಜದ ಮದ್ಯೆ ನಮ್ಮದೇ ಒಂದಷ್ಟು ಚೌಕಟ್ಟಿನ ನಡುವೆ Suffocate ಆಗಿಯೇ ಬದುಕುತ್ತೇವೆ. ಅದಕ್ಕೆ ಇರಬೇಕು ನಾವು ನಮ್ಮ ಖುಷಿಯನ್ನು ಮಾತ್ರ ಜನರ ಮುಂದೆ, ಸಮಾಜದ ಮುಂದೆ ತೋರಿಸುತ್ತಾ, social media ದಲ್ಲಿ ಚಂದದ, ನಗುತ್ತಿರುವ ಫೋಟೋ ಹಾಕಿ ಮುಖವಾಡದ ನಡುವೆಯೇ ಬದುಕುತ್ತೇವೆ. ಇದು ಯಾರ ತಪ್ಪು ಅಲ್ಲ, ಇದು ನಮ್ಮ ಸುತ್ತಲಿರುವ ಜನರ, ಸರಿ ತಪ್ಪುಗಳ, ರೀತಿ ನೀತಿಗಳ ತಪ್ಪು. ಎಲ್ಲವನ್ನು ಪಾಲಿಸಬೇಕು ನಿಜ ಆದರೆ ನಮ್ಮತನವನ್ನು ಬಿಟ್ಟು, ನಮ್ಮ ಖುಷಿಯನ್ನು ಒತ್ತೆ ಇಟ್ಟು ಅಲ್ಲ
ಬದುಕಿನ ತುಂಬಾ Masculine ಆಗಿ ಬದುಕಿದವಳು ನಾನು. ನಾನು, ನನ್ನ ತಂಗಿ ಚಿಕ್ಕವಳಿರುವಾಗ ಮನೆಗೆ ಬರುತ್ತಿದ್ದ ಹೆಚ್ಚಿನ ಜನರಲ್ಲಿ “ಅಯ್ಯೋ ಇಬ್ಬರು ಹೆಣ್ಣು ಮಕ್ಕಳು ಮುಂದೆ ಹೇಗೆ” ಎಂದು ಕೇಳಿದಾಗಲೆಲ್ಲ, ಅಪ್ಪ-ಅಮ್ಮನ, ತಂಗಿಯ ಜವಾಬ್ದಾರಿ ನನ್ನದು, ಅವರನ್ನು ನಾನು Protect ಮಾಡಬೇಕು ಎಂಬ ಮನಸ್ಥಿತಿಯೊಂದಿಗೆ ಬೆಳೆದವಳು ನಾನು. ನೋಡುವವರಿಗೆ, ಇವಳಿಗೆ ಸೊಕ್ಕು, ಅಹಂಕಾರ, ಸಿಟ್ಟು ಎಂದು ಅನಿಸಿದರೂ ನಾನು ಮಾತ್ರ ಯಾವುದೇ ಕಾರಣಕ್ಕೂ weak ಆಗಬಾರದು ಎಂದು ಬೆಳೆದವಳು ನಾನು. ಎಲ್ಲರನ್ನೂ Protect ಮಾಡಬಹುದು ಎಂಬ ನನ್ನ ನಿಲುವಿಗೆ ಮೊದಲ ಪೆಟ್ಟು ಅವನ ಸಾವು. (ತಮ್ಮ- Cousin Brother). ಅವನು ಮನಸಿಗೆ ತುಂಬಾ ಹತ್ತಿರವಿದ್ದ ಒಂದು ಜೀವ. Pure soul ಅಂತಾರಲ್ಲ ಅದನ್ನು ಇವನ್ನನ್ನು ನೋಡಿಯೇ ಹೇಳಿರಬೇಕು ಎಂಬಷ್ಟು ಸುಂದರ ಮನಸ್ಸಿನ ಜೀವ ಅದು. ತುಂಬಾ ಸಮಯ cancer ಹೋಸ್ಪಿಟಲ್ನಲ್ಲಿ, ಅವನ ಸುತ್ತ ಮುತ್ತ ಕಳೆಯುತ್ತಿದ್ದ ನನಗೆ ಮೊದಲ ಸಲ ದೇವರ ಮೇಲೆ ನಂಬಿಕೆ ಹೋಗಿದ್ದು. ಬದುಕು ಅಂದರೇ ಇಷ್ಟೇನಾ ಅನ್ನಿಸಿದ್ದು. ಅಲ್ಲಿಯವರೆಗೂ ಕಲ್ಲಿಗೂ ಕೈ ಮುಗಿಯುತ್ತಿದ್ದ ನಾನು, ದೇವರು ಎಂದರೆ ಮೇಲೆಲ್ಲೋ ಇದ್ದಾನೆ ಎಂದು ನಂಬಿದ್ದ ನಾನು, ನಾವು ತುಂಬಾ ಮನಸ್ಸಿಂದ ಏನಾದರು ಕೇಳಿದರೆ ದೇವರು ಕೊಡುತ್ತಾನೆ ಎಂದು ನಂಬಿದ್ದ ನಾನು ಎಲ್ಲವನ್ನು ಬಿಟ್ಟು ಕುಳಿತಿದ್ದು.
ಅವನು ಹೋದ ಮೇಲೆ ತುಂಬಾ ಅತ್ತಿದ್ದೇನೆ. ಈಗಲೂ ವಾರಕ್ಕೊಮ್ಮೆ ಅವನ ನೆನೆಪಾಗಿ ಬಿಕ್ಕುತ್ತೇನೆ, ಅವನಿಗೆ ಆಗಿದ್ದು ಮೋಸ ಅನ್ನಿಸುತ್ತದೆ. ಆದರೆ ಅದರ ನಂತರ ಅನ್ನಿಸಿದ್ದು ಬದುಕು ಕ್ಷಣಿಕ. ಯಾರಿಗೂ ಬೇಸರ ಮಾಡಬಾರದು. ನಮಗಿಂತ ಜಾಸ್ತಿ ಬೇರೆಯವರ ಬಗ್ಗೆ ಯೋಚಿಸಬೇಕು. ನಮಗೆ ಎಷ್ಟು ಸಾಧ್ಯವೋ ಅಷ್ಟು ಬೇರೆಯವರಿಗೋಸ್ಕರ ಮಾಡಬೇಕು ಎಂದು. ಇಷ್ಟು ವರ್ಷ ನನ್ನ ಹತ್ತಿರದ ಜನರನ್ನು ಮಾತ್ರ Priority ಎಂದೂ ಬದುಕಿದವಳು, ಇದರ ನಂತರ ಸುತ್ತಲಿನ ಎಲ್ಲರನ್ನು ಗುಪ್ಪೆ ಹಾಕಿಕೊಂಡು, ನನ್ನ ಎಲ್ಲಾ ಖುಷಿ, ಆಸೆಗಳನ್ನು, ಕಷ್ಟಗಳನ್ನೂ, ಅವಶ್ಯಕೆತೆಯನ್ನು ಬದಿಗೊತ್ತಿ ಬೇರೆಯವ್ರಿಗೋಸ್ಕರವೇ ಬದುಕಲು ಶುರು ಮಾಡಿದೆ. ದೇವರಿಲ್ಲ ಎಂದು ಅನ್ನಿಸಿದ ನಂತರ ಅನ್ನಿಸಿದ್ದು ಮನುಷ್ಯರಲ್ಲೇ ದೇವರನ್ನು ಕಾಣಬೇಕು, ನಾವು ಬೇರೆಯವರನ್ನು ಹೇಗೆ ಪ್ರೀತಿಸುತ್ತೇವೆ, ಅವರಿಗಾಗಿ ಏನು ಮಾಡುತ್ತೇವೆ, ನಮ್ಮ ಒಳ್ಳೆತನದಲ್ಲಿಯೇ ದೇವರಿದ್ದಾನೆ ಎಂದು. ಆದರೆ ಸತ್ಯ ಏನೆಂದರೆ ಯಾವುದು ಅತಿಯಾಗಬಾರದು. ಯಾವುದೋ ಒಂದು ಅತಿಯಾದಾಗ ನಮ್ಮನ್ನೇ ನಾವು ಕಳೆದುಕೊಳ್ಳುತ್ತೇವೆ. ಅದೆಷ್ಟೋ ವರ್ಷ ನನಗೇನು ಬೇಕು ಎಂಬ clarity ಯೇ ಇಲ್ಲದೆ ಬದುಕಿದ್ದೇನೆ ನಾನು. ಯಾವಾಗಲು ಎಲ್ಲರಿಗೂ ಕಿವಿಯಾಗಿದ್ದೇನೆ, ಆದರೆ ನನ್ನ ವಿಷಯ ಬಂದಾಗ ಮೌನವಾಗುತ್ತೇನೆ.
ಆದರೆ ಅವಶ್ಯಕತೆ ಇಲ್ಲದಿರುವಲ್ಲಿ ನಮ್ಮ Energy ಅದೆಷ್ಟೋ ವಿಷಯಗಳು ಅರಿವಾಗುವುದಿಲ್ಲ ನಮಗೆ. ಎಲ್ಲರನ್ನು ಸಮಾಧಾನಪಡಿಸುವ ಬರದಲ್ಲಿ ನಾನು ನನ್ನನು ಕಳೆದುಕೊಂಡಿದ್ದು ಯಾವಾಗ ಎಂದು ಅರ್ಥವಾಗಲೇ ಇಲ್ಲ ನನಗೆ. ಅದೆಷ್ಟೋ ವರ್ಷ ಹೀಗೆ ಬದುಕಿದ ಮೇಲೆ, ನಾವು Taken for granted ಅದ ಮೇಲೆ ನಮಗೆ ಮುಂದೇನು ಎಂಬುದು ಅರ್ಥವಾಗುವುದೇ ಇಲ್ಲ. ಅವಾಗ ಬರುವ ಭಾವ, ನಾನು ಇವರೆಲ್ಲರಿಗಾಗಿ ಇಷ್ಟೆಲ್ಲಾ ಮಾಡಿದ್ದೇನೆ ಆದರೆ ಇವರು ನನಗ್ಯಾಕೆ ಹೀಗೆ ಮಾಡಿದರು ಎಂಬುದು. ನಾನು ಬದಲಾಗಬೇಕು ಎಂಬುದು, ಹೊಸತಾಗಿ ಬದುಕಬೇಕು ಎಂಬುದು. ನಾವೆಲ್ಲರೂ ಬದುಕಿನಲ್ಲಿ ಅದೆಷ್ಟೋ ಸಲ ಈ ಭಾವಗಳೊಂದಿಗೆ ಕುಳಿತಿದ್ದೇವೆ. ಆದರೆ ಇದಕ್ಕೆ ಉತ್ತರ ಸಿಗುವುದಿಲ್ಲ, ನಾವು ಬಿಡುವುದಿಲ್ಲ. ಆಗ ಹುಟ್ಟುವ ಇನ್ನೊಂದು ಭಾವವೇ Rejection. ನನಗೆ ಯಾರು ಬೇಡ. ನನಗೆ ಯಾರು Energy ಕೊಡುತ್ತಾರೋ ಅವರಿಗೆ ಮಾತ್ರ ನಾನು ನನ್ನ ಸಮಯ ಕೊಡುತ್ತೇನೆ, ನಾನು ಇಷ್ಟು ವರ್ಷ ಬದುಕಿದ ರೀತಿ ಸರಿಯಿಲ್ಲ. ಇನ್ನು ನಾನು ನನ್ನನು priority ಆಗಿಸಿಕೊಂಡು ಬದುಕುತ್ತೇನೆ ಎಂಬುದು. ಅಲ್ಲಿಂದ ಹೊಸ Journey ಶುರುವಾಗುತ್ತದೆ. Self realisation, Self Care, Solo Trips, ನಮ್ಮ ದೇಹ ಮತ್ತು mental helath ಗೆ ಹೆಚ್ಚು importance ಕೊಡಲು ಶುರು ಮಾಡುವುದು. ಮುಂಚೆ ಎಲ್ಲವನ್ನು ನಾನೇ proactive ಆಗಿ ಮಾಡುತ್ತಿದ್ದವಳು ಸುಮ್ಮನೆ ಕೂರಲು ಶುರು ಮಾಡಿದ್ದೂ. ಅವಶ್ಯಕತೆ ಇಲ್ಲದಿರುವಲ್ಲಿ energy ಹಾಕದಿರುವುದನ್ನು ಕಲಿತುಕೊಂಡಿದ್ದು.
ಅಲ್ಲಿಗೆ ಎಲ್ಲವೂ ಸರಿಯಾಗಿದೆ ಎಂದು ಆಂದುಕೊಂಡು ಬದುಕುತ್ತಿದವಳಿಗೆ, ಅದೇನೋ ಬೇಕಿತ್ತು, ಏನೋ missing ಇದೆ, ಏನೋ ಇನ್ನು ಚಂದವಾಗಬೇಕು ಎಂಬ ಹುಡುಕಾಟ ಶುರುವಾಗುತ್ತದೆ. ಅಲ್ಲಿಗೆ ಸಿಕ್ಕಿದ್ದುಈ ಜಾಗ, “Osho Sannidhi Mysore” ಓಶೋ ಎಂದ ಕೂಡಲೇ ಜನರಿಗೆ ಬರುವ ಪ್ರಶ್ನೆಗಳು ಹಲವು. ಅದೆಷ್ಟೋ ಜನರು ಹೆಸರು ಕೇಳಿದರೆ ಮೂಗು ಮುರಿಯುವುದು ಇದೆ. ನಾನು ಮೊದಲ ಸಲ ಇಲ್ಲಿಗೆ ಹೋಗಿದ್ದು 2023 ಲ್ಲಿ. ನಾನು ಹೋಗಿದ್ದು ಇಲ್ಲಿ ಅಂತದ್ದು ಏನಿರಬಹುದು ಎಂದು ನೋಡಬೇಕು ಎಂಬ ಕುತೂಹಲದಲ್ಲಿ. ಆದರೆ ಈಗ ಅನ್ನಿಸುತ್ತದೆ ಇದು ನನ್ನ ಬದುಕಿನ ಅತ್ಯಂತ Best Decision ಎಂದು. ನನ್ನ ಅದೆಷ್ಟೋ ಪ್ರಶ್ನೆಗಳಿಗೆ ಉತ್ತರ ಕೊಟ್ಟ ಜಾಗ ಇದು, ನನಗೆ ನಾನು ಏನು ಎಂದು ತೋರಿಸಿಕೊಟ್ಟ ಜಾಗ ಇದು, ಇಡೀ ಜಗತ್ತಿನಲ್ಲಿಯೇ ಅತ್ಯಂತ Safe ಅನ್ನಿಸುವ ಜಾಗ ಇದು, ನಾನು weak ಆಗಬಹುದಾದ, ಮನಸ್ಸು ಬಿಚ್ಚಿ ಅಳುವ, ನಗುವ, ನನ್ನೊಂದಿಗೆ ನಾನಿರುವ, ಮಾತಾಡುವ ಜಾಗ ಇದು. ಗಂಡಸರಿಗೂ ನೋವಿದೆ, ಅವರಿಗೂ ಅಳಲು ಅವಕಾಶ ಬೇಕು, ಅದಕ್ಕೆ ಅವಕಾಶ ಕೊಡದೆ ಅವರು ಅದೆಷ್ಟು suppress ಆಗಿ ಬದುಕುತ್ತಾರೆ ಎಂದು ನೋಡಿದ ಜಾಗ ಇದು, ಯಾರು ಯಾರನ್ನು Judge ಮಾಡದ ಜಾಗವಿದು. ನನಗೆ ತುಂಬಾ ನೆಮ್ಮದಿ ನೀಡುವ ಜಾಗವಿದು. ಬರಿ ಮುಖವಾಡ ಹಾಕಿ ಬದುಕುವ ಜನರ ನಡುವೆ, ನಾವು ನಾಟಕ ಮಾಡಿ ಬದುಕುವಾಗ, ಇದು ಬದುಕುವ ರೀತಿಯಲ್ಲ ಎಂದು ಹೇಳಿ ಕೊಟ್ಟ ಜಾಗ ಇದು. ಒಂದು age ಅದ ಕೂಡಲೇ ನಾವು ಹೆಣ್ಣು ಮಕ್ಕಳಿಗೆ ಅಪ್ಪ ಎಂಬ ಜೀವ ದೂರವಾಗಿಬಿಡುತ್ತದೆ. ಹೆಚ್ಚಾಗಿ ಹಳ್ಳಿಯಲ್ಲಿ ಬೆಳೆದ ಹೆಣ್ಣು ಮಕ್ಕಳಂತೂ ಅಪ್ಪನನ್ನು Hug ಮಾಡಲು ಮುಜುಗರ ಪಡುತ್ತೇವೆ. ಎಲ್ಲರೂ ಅದನ್ನೇ follow ಮಾಡುವುದರಿಂದ ನಾವು ಅದನ್ನೇ ಮಾಡುತ್ತೇವೆ. ಇನ್ನು ಅಪ್ಪಂದಿರಿಗಂತೂ ಮಗಳು ದೊಡ್ಡವಳಾಗುತ್ತಿದ್ದಂತೆ ಒಂದು ಅಂತರ ಕಾಯ್ದುಕೊಳ್ಳಲು ಶುರು ಮಾಡುತ್ತಾರೆ. ಆದರೆ ಈ ಜಾಗ ಚೂರು ಎಗ್ಗು ಸಿಗ್ಗಿಲ್ಲದೆ ಅಪ್ಪನನ್ನು ಗಟ್ಟಿಯಾಗಿ ಅಪ್ಪಿಕೊಳ್ಳಲು ಕಲಿಸಿ ಕೊಟ್ಟಿದೆ. ನಾನು ತುಂಬಾ ಕೆಟ್ಟದಾಗಿ ಡಾನ್ಸ್ ಮಾಡುತ್ತೇನೆ ಎಂದು ನಾನು ಕಾಲೇಜ್ನಲ್ಲಿ ಇರುವಾಗಿನಿಂದಲೂ ತುಂಬಾ ಬಿರುದುಗಳು ಸಿಕ್ಕಿ, ಮನಸ್ಸು ಪೂರ್ತಿಯಾಗಿ ಡಾನ್ಸ್ ಮಾಡದೇ, ಡ್ಯಾನ್ಸ್ ಎಂದ ಕೂಡಲೇ ಹಿಂದೆ ಸರಿಯುತಿದ್ದ ನನಗೆ ಯಾವುದರ ಪರಿವೆಯೇ ಇಲ್ಲದೆ ಕುಣಿಯುವುದನ್ನು ಕಲಿಸಿದೆ. ನನಗೆ ಬೇಸರದ ಕೆಲಸ ಎಂದರೆ ಸುಮ್ಮನೆ ಕೂರುವುದು, ನಿನಗಾಗಿ ನೀನು ದಿನದ ಸ್ವಲ್ಪ ಸಮಯವಾದರೂ silence ಅಲ್ಲಿ ಕೂರಬೇಕು ಎಂದು ಈ ಜಾಗ ಹೇಳಿ ಕೊಟ್ಟಿದೆ. ಕಷ್ಟ, ನೋವು, ದುಃಖ, ಗಾಯಗಳನ್ನು ನಿಭಾಯಿಸುವ ರೀತಿಯನ್ನ ಹೇಳಿ ಕೊಟ್ಟಿದೆ. ಕಷ್ಟ, ಸುಖವನ್ನು ಹೇಳಿಕೊಳ್ಳಲು ಒಂದಷ್ಟು ಸಮಾನ ಮನಸ್ಕ ಜೀವಗಳನ್ನ ಪರಿಚಯಿಸಿ ಕೊಟ್ಟಿದೆ. ಎಲ್ಲಕ್ಕಿಂತ ಹೆಚ್ಚಾಗಿ ಯಾವಾಗಲೂ ಗಟ್ಟಿಯಾಗಿ, ಬಲವಾಗಿ ಬದುಕಬೇಕಿಲ್ಲ, weak ಆಗುವುದು ಎಂದರೆ ಸೋಲುವುದು ಎಂದಲ್ಲ ಎಂದು ಹೇಳಿ ಕೊಟ್ಟಿದೆ. ಈ ಜಾಗದಲ್ಲಿ ನನ್ನ Masucline energy ಯನ್ನು ಬದಿಗೊತ್ತಿ ಸಂಪೂರ್ಣವಾಗಿ Feminine ಆಗಿ ಬದುಕುತ್ತೇನೆ ನಾನು.
ಹಾಗಾದರೆ ಇಲ್ಲಿ ಹೋಗಿ ಬದಲಾಗಿದ್ದೆನು? ಮುಂಚೆ ಇಲ್ಲದಿರುವುದನ್ನು ಏನು ಮಾಡುತ್ತಿದ್ದೇನೆ ಎಂದು ಕೇಳಿಕೊಂಡಾಗ ಸಿಗುವ ಉತ್ತರ, ಎಲ್ಲಾ ಪ್ರಶ್ನೆಗೂ ಉತ್ತರ ನಮ್ಮಲ್ಲಿಯೇ ಇದೆ. ನಾವೂ ಮಾತ್ರ ಅಲ್ಲಿ, ಇಲ್ಲಿ, ಎಲ್ಲೆಲ್ಲೋ ಹುಡುಕುತ್ತೇವೆ. ಧ್ಯಾನ ಎಂದರೆ ಮಾಡುವುದಲ್ಲ ಅದು ನಿನ್ನೊಂದಿಗೆ ನೀನು ಸಂಪೂರ್ಣವಾಗಿ ಇರುವಾಗ, ಕುಳಿತುಕೊಂಡಾಗ ಆಗುವುದು. ಎಲ್ಲ ಭಾವಗಳು ಇರುವುದು ನಮ್ಮ ಒಳಗೆ, ನಮಗೆ ಬೇಡದ ಗದ್ದಲಕ್ಕೆ ಕಿವುಡಾದರೆ ಯಾವುದು ನಮ್ಮನ್ನು disturb ಮಾಡಲು ಸಾಧ್ಯವಿಲ್ಲ ಎಂದು. ಎಲ್ಲವೂ ಬದಲಾಗಿದೆ, ಬೇಕಾದಂತೆ ಇದೆ ಎಂದಲ್ಲ, ಯಾವುದೇ ಪರಿಸ್ಥಿತಿಯನ್ನು ನಿಭಾಯಿಸುವುದನ್ನು ಕಲಿತುಕೊಳ್ಳುತ್ತಿದ್ದೇನೆ. ಮೌನ ಬೇಕು ಅನ್ನಿಸಿದಾಗ ಸುಮ್ಮನೆ ಕೂರುತ್ತೇನೆ. ಓಡಾಟ ಬೇಕು ಅನ್ನಿಸಿದಾಗ ಬ್ಯಾಗ್ ಎತ್ತಿಕೊಂಡು ಹೋಗುವ ಪ್ರಯತ್ನ ಮಾಡುತ್ತೇನೆ, ಯಾವುದೋ Cafeಯಲ್ಲೋ , ಕಾಫಿ Cupನಲ್ಲೋ, ಯಾವುದೋ ಸಮುದ್ರದ ಅಂಚಿನಲ್ಲೋ ಹೋಗಿ ನನ್ನಲ್ಲೇ ಕಳೆದು ಹೋಗುತ್ತೇನೆ. ಯಾವುದೇ ವಿಚಾರಕ್ಕೆ Trigger ಆಗುವುದನ್ನು ಕಡಿಮೆ ಮಾಡಿ ಕೊಂಡಿದ್ದೇನೆ. ತುಂಬಾ ಪ್ರೀತಿಯಿಂದ ಪ್ರೀತಿಸುತ್ತೇನೆ. ಅನಾವಶ್ಯಕವಾದುದ್ದನ್ನು ದೂರ ಇಟ್ಟು ಬದುಕುವ ಪ್ರಯತ್ನ ಮಾಡುತ್ತೇನೆ.
“ಯಾರಿಗಿಲ್ಲಿ ನೋವಿಲ್ಲಾ, ಯಾರಿಗಿಲ್ಲಿ ಸಾವಿಲ್ಲಾ” ಅದೆಷ್ಟು ಸತ್ಯವಾದ line ಅನ್ನಿಸುತ್ತದೆ ನನಗೆ. ಪ್ರತಿದಿನ ಭಯದಲ್ಲಿ ಬದುಕುತ್ತೇವೆ ನಾವು, ಸಮಾಜದ್ದು, ಸುತ್ತಮುತ್ತಲಿನ ಜನರದ್ದು,ಅವರು, ಇವರು, ಸಂಬಂಧವೇ ಇಲ್ಲದ ಆ 4 ಜನ ಏನಂದುಕೊಳ್ಳಬಹುದು ಎಂಬ ಭಯ. ಅದಕ್ಕೆ ನಾವು ಏನನ್ನು ಹಂಚಿಕೊಳ್ಳದೇ ನಗುತ್ತಿರುವ Selfie ಹಾಕಿ ನಾನೆಷ್ಟು ಖುಷಿಯಾಗಿದ್ದೇನೆ ಎಂದು pose ಕೊಡುತ್ತೇವೆ. ನಾವೂ ಹೆಣ್ಣು ಮಕ್ಕಳು ಅಲ್ಲೋ, ಇಲ್ಲೋ, ಹೊದಿಕೆ ಮುಚ್ಚಿ ಹಾಕಿಕೊಂಡಾದರು ಅಳುತ್ತೇವೆ. ಆದರೆ ಪಾಪ ಅದೆಷ್ಟೋ ಗಂಡಸರಿಗೆ ಆ ಅದೃಷ್ಟವು ಇರುವುದಿಲ್ಲ. ನಮ್ಮ ಸಮಾಜದ rules ಪ್ರಕಾರ ಗಂಡಸರು ಅಳಬಾರದು. ಅಂತವರು ಒಮ್ಮೆ ಹೋಗಿ ಇಲ್ಲಿ ಅತ್ತು ನೋಡಿ ತುಂಬಾ ಸಹಾಯವಾಗಬಹುದು. ಎಷ್ಟೋ ವರ್ಷಗಳಿಂದ ಗಟ್ಟಿಯಾಗಿರುವ ಎಲ್ಲಾ ಭಾವಗಳು ಒಮ್ಮೆಗೆ ಕರಗಿ ಹಗುರಾಗುವ ಎಲ್ಲಾ ಅವಕಾಶಗಳು ಇದೆ. ಇನ್ನು ಎಲ್ಲರಿಂದಲೂ, ಎಲ್ಲವುಗಳಿಂದಲೂ ಸಾಕಾಗಿರುವ ಒಂದಷ್ಟು ಜನರಿಗೆ ಈ ಜಾಗ ಹೆಗಲಾಗಬಹುದು. ಮನಸ್ಸಿಗೆ ಹತ್ತಿರವಾದ ಏನನ್ನೋ, ಯಾರನ್ನೋ ಕಳೆದುಕೊಂಡು, ಎಲ್ಲಿ ಈ ಭಾರವನ್ನು ಇಳಿಸಬಹುದು ಎಂದು ಅರ್ಥವಾಗದ ಮನಸ್ಥಿತಿಯಲ್ಲಿ ನೀವಿದ್ದರೆ, ನಿಮ್ಮ ಪ್ರಶ್ನೆಗೆ ಇದು ಉತ್ತರವಾಗಬಹುದು.
ಅಂದ ಹಾಗೇ ನಾನು ಯಾವುದೇ ರೀತಿಯ Promotion ಮಾಡುತ್ತಿಲ್ಲ.ಈ ಜಾಗಕ್ಕೆ ಅದರ ಅವಶ್ಯಕತೆಯೇ ಇಲ್ಲಾ. ಈ ವರ್ಷ ನಾನು ಮಾಡಿರುವ resolution ಇದೊಂದೇ. ನನಗೆ ತುಂಬಾ ಸಹಾಯವಾದ, ಮನಸ್ಸಿಗೆ ಹತ್ತಿರವಾದ ವಿಷಯಗಳನ್ನು ಹಂಚಿಕೊಳ್ಳುವುದು ಅಷ್ಟೇ. ತುಂಬಾ Extrovert ಅನ್ನಿಸುವ Introvert ಆಗಿರುವ ನನಗೆ ಹಾಗೂ ಅದೆಷ್ಟೋ ಜನರಿಗೆ ಈ ಜಾಗ ಹೆಗಲಾಗುವುದನ್ನು ನೋಡಿದ್ದೇನೆ ನಾನು. ನಾನು ನಂಬುವುದು ಇಷ್ಟೇ, ಯಾವುದೇ ಇರಲಿ, ನಾನು ಏನು ಮಾಡುತ್ತಿದ್ದೇನೆ, ಎಷ್ಟು energy ಕೊಡುತ್ತಿದ್ದೇನೆ, ನನಗೆಷ್ಟು ಅವಶ್ಯಕತೆಯಿದೆ, ನಾನು ಯಾವುದನ್ನೂ ತೆಗೆದುಕೊಳ್ಳಬೇಕು, ಯಾವುದನ್ನೂ ಬಿಡಬೇಕು, ನನ್ನ ಇರುವಿಕೆಗೆ ಎಷ್ಟು ಬೇಕು ಎಂಬ ಅಂದಾಜಿದ್ದರೆ, ನಾವು ನಾವಾಗಿರಲು ಸಹಾಯ ಮಾಡಿದರೆ, ಅರಿವು ಮೂಡಿಸಿದರೆ, ನಿಷ್ಕಲ್ಮಷವಾಗಿ ಪ್ರೀತಿಸಲು ಕಲಿಸಿದರೆ ಅದನ್ನು ಬಾಚಿ ತಬ್ಬಿಕೊಳ್ಳಬೇಕು. ಈಗ ನಮ್ಮಲ್ಲಿ ಎಲ್ಲವೂ ಇದೆ ಸಮಾಧಾನ ಮತ್ತು ನೆಮ್ಮದಿಯನ್ನು ಬಿಟ್ಟು. ಈ ಜಾಗ ಅದನ್ನು ಕೊಡುತ್ತದೆ ಎಂದು ಹೇಳುವುದಿಲ್ಲ, ಆದರೆ ಖಂಡಿತ ನಿಮ್ಮಲ್ಲಿ, ನಿಮ್ಮೊಳಗೆ ಅದನ್ನು ಹೇಗೆ ಕಂಡುಕೊಳ್ಳಬಹುದು ಎಂದು ಯೋಚಿಸಲು, ಅರಿತುಕೊಳ್ಳಲು ಹಚ್ಚುತ್ತದೆ.
1. ಇಲ್ಲಿ ಪ್ರತಿ ತಿಂಗಳಿಗೊಮ್ಮೆ 3 ದಿನಗಳ ಶಿಬಿರ ನಡೆಯುತ್ತದೆ. ಅತ್ಯಂತ ಕಡಿಮೆ ದರದಲ್ಲಿ ಊಟ, ವಸತಿ, ಡ್ಯಾನ್ಸ್, ಧ್ಯಾನ ಚಟುವಟಿಕೆಗಳನ್ನು ನಡೆಸುತ್ತಾರೆ.
2. ನಾನು ಇಲ್ಲಿಯವರೆಗೆ ಹೋಗಿರುವುದು ಮೈಸೂರಿನಲ್ಲಿ ಇರುವ Osho Sannidhi ಗೆ ಮಾತ್ರ, ಹಾಗಾಗೀ ನನಗೆ ಬೇರೆ Osho Camp ಗಳ ಬಗ್ಗೆ ಯಾವುದೇ ವಿವರ ಗೊತ್ತಿಲ್ಲಾ.
“ದ್ರಷ್ಟಿ ಬದಲಿಸಿ ನೋಡು ದೃಶ್ಯವೇ ಬದಲಾದೀತು
ಹವ್ಯಾಸ ಬದಲಿಸಿ ನೋಡು ಹಣೆಬರಹವೇ ಬದಲಾದೀತು
ವಿಚಾರ ಬದಲಿಸಿ ನೋಡು ದೇಶವೇ ಬದಲಾದೀತು
ದೋಣಿ ಬದಲಿಸಬೇಕೆಂದಿಲ್ಲ ದಿಕ್ಕು ಬದಲಿಸಿದರೆ ಸಾಕು
ನೀ ಸೇರುವ ದಡ ಎದುರಾದೀತು”
ಅಷ್ಟೇ………………………………………………
Leave a Reply