Anita Bhat
Osho Sannidhi ಇದೆ ಮೈಸೂರಿನಲ್ಲಿ, ನಿಮಗೆ ಇಷ್ಟ ಆಗಬಹುದು ನೋಡಿ”- ಸಂಪತ್ ಇದನ್ನ ಹೇಳಿದ್ದು September ನಲ್ಲಿ, ಹೊಸನಗರದ shooting ನಲ್ಲಿ. ಒಂದಿಷ್ಟು ಮಾಹಿತಿ ವಿನಿಮಯ ಆದಮೇಲೆ ಅಲ್ಲಿಗೆ ಹೋಗೋ ಹುಚ್ಚಿಗೆ ಬಿದ್ದೆ ನಾನು. ಅಲ್ಲಿಂದ ನನ್ನ ಪಿರಿಪಿರಿ ಶುರುವಾಯ್ತು ಸಂಪತ್‌ಗೆ. ‘ಯಾವಾಗ next camp?ಯಾವಾಗ, ಯಾವಾಗ, when?’ ಅದಕ್ಕೆಲ್ಲ ಬೇಜಾರಾಗೋ ವ್ಯಕ್ತಿ ಏನು ಅಲ್ಲ ಸಂಪತ್. Renovate ಆಗ್ತಿದೆ, ಹೇಳ್ತೀನಿ ಇರಿ ಅಂತಾ ಸಮಾಧಾನ ಮಾಡ್ತಾನೇ ಬಂದ್ರು. December ನಲ್ಲಿ ಶುರುವಾಯ್ತು ಅಂತ ಗೊತ್ತಾಯ್ತು. ಹೋಗೋದಕ್ಕೆ ಆಗ್ಲಿಲ್ಲ. January ಕೂಡ ಹಾಗೇ ಕಳೀತು. February ನಲ್ಲಿ ನಾನು decide ಮಾಡೇಬಿಟ್ಟಿದ್ದೆ, ಏನೇ ಆದ್ರೂ ಹೋಗೆ ಹೋಗ್ತೀನಿ ಅಂತ. Register ಆಯ್ತು. ಯಾವಾಗ್ಲೂ ಎಲ್ಲೇ ಹೋಗೋವಾಗ್ಲೂ, ಒಂದಿಷ್ಟು basic enquiry ಮಾಡ್ತೀವಿ ಅಲ್ವಾ? ನಾನು ಏನು ತಿಳಿದುಕೊಳ್ಳೋ ತಂಟೆಗೆ ಹೋಗ್ಲೇ ಇಲ್ಲ. online search, reviews, photos… ಊಹುಂ…ನಾನು empty ಆಗೇ ಹೋಗಬೇಕು, ನನಗೆ ಹೊಸದಾಗಿ ಏನೋ ಸಿಗಬೇಕು ಅಂತಾ ತೀರ್ಮಾನ ಆಗಿಬಿಟ್ಟಿತ್ತು ಅನ್ನಿಸತ್ತೆ.
Osho ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ನಂಗೆ Osho speech ತುಂಬಾನೇ ಇಷ್ಟ. ನಾನು YouTube ನಲ್ಲಿ follow ಮಾಡೋ ಕೆಲವೇ ವ್ಯಕ್ತಿಗಳಲ್ಲಿ osho ನೇ ಪ್ರಥಮ. Sex Guru ಅಂತಾ ಪ್ರಸಿದ್ಧಿಯಾದಿರೋ Osho ನಂಗೆ ಒಬ್ಬ philosopher ಆಗಿ ಕಾಣಿಸಿದ್ರೇ ಹೊರತು, spiritual Guru ಅಲ್ಲ. He is practicle and ನಂಗೆ ಸಿಕ್ಕಾಪಟ್ಟೆ ಇಷ್ಟ ಆಗಿದ್ದು ಅದೇ. ಒಂದಂತೂ ಗೊತ್ತಿತ್ತು, Osho ಸನ್ನಿಧಿಯಲ್ಲಿ ದೇವರು-ದಿಂಡರು, ಭಕ್ತಿ-ಪೂಜೆ ಇದೆಲ್ಲಾ ಇರೋದಿಲ್ಲ ಅಂತಾ. Osho ಹತ್ತಿರ ರಾಮ-ಕೃಷ್ಣ- ಅಲ್ಲಾ-ಏಸು ಯಾರೂ ಇಲ್ಲ. ಈ ಸ್ಪಷ್ಟತೆ ಇದ್ದಿದ್ರಿಂದಾನೇ ಮನಸ್ಸಿಗೆ ಬಂದ ಬಟ್ಟೆ ಇಟ್ಕೊಂಡು ಹೋಗಿದ್ದು.
ಹೋದ ಸ್ವಲ್ಪ ಹೊತ್ತಲ್ಲೇ ಶುರು ಮಾಡಿದ್ರಪ್ಪ – “Hall ಗೆ ಬನ್ನಿ”. ಅಲ್ಲಿ ಕಾಣಿಸಿದ್ದು Osho photo, ನನ್ನನ್ನೇ, ಕಣ್ಣಲ್ಲಿ ಕಣ್ಣಿಟ್ಟು, ಮಾದಕವಾಗಿ, ಪ್ರೇಮದಿಂದ ನೋಡ್ತಾ ಇದ್ದ ಒಶೋ. ನಂಗೇನು ಮೈ ಝುಮ್ ಅಂದಿಲ್ಲ. ನಾನು ಕೂಡ ಅಷ್ಟೇ ಪ್ರೇಮದಿಂದ ಕಣ್ಣಲ್ಲಿ ಕಣ್ಣಿಟ್ಟೆ ಅಷ್ಟೇ. ಅಷ್ಟರಲ್ಲೇ ಒಬ್ಬ ವ್ಯಕ್ತಿಯ ಪ್ರವೇಶ. ಬಂದ್ರು, ಕೂತ್ರು, ಮಾತಾಡೋದಕ್ಕೆ ಶುರು ಮಾಡಿದ್ರು. Self introduction ಇಲ್ಲ, ನೀವ್ಯಾರು ಅಂತ ಕೇಳಿಲ್ಲ, ಪ್ರವಚನ ಇಲ್ಲ. ಸುಮ್ನೆ ಹರಟೆ ಹೊಡೆಯೋದು ಅಷ್ಟೆ. ಅಲ್ಲ, ಯಾವ ಹೆಂಗಸರಿಗೆ ಹರಟೆ ಇಷ್ಟ ಇಲ್ಲ ಹೇಳಿ. ಮಾತುಕತೆ, ನಗು ಹೀಗೇ ಸಮಯ ಕಳೀತು. ಸಂಜೆ ಸತ್ಸಂಗಕ್ಕೆ ಬನ್ನಿ ಅಂದ್ರು. ಏನೋ ವಿಶೇಷ ಇದೆ ಅಂತ ಹೋದೆ… ಮತ್ತೆ same, ಮಾತು, ಹರಟೆ, ನಗು…
ನಿಧಾನಕ್ಕೆ ಮಾತಾಡ್ತಾ ಮಾತಾಡ್ತಾ ಈ ವ್ಯಕ್ತಿ ನಮ್ಮನ್ನೆಲ್ಲಾ ಆವರಿಸಿಕೊಂಡಿದ್ದು ಗೊತ್ತೇ ಆಗ್ಲಿಲ್ಲ. ಯಾವತ್ತೂ ಈ ಭಾಷಣ ಎಲ್ಲಾ ಕೇಳಿಸಿಕೊಳ್ಳೋ ಸಹನೆ ಇಲ್ಲದಿರೋ ನಾನು ಕಣ್ಣು ಮಿಟುಕಿಸದೇ ಮಗ್ನಳಿದ್ದೆ. ನಂಗೆ ಮಾತಾಡೋದಕ್ಕೆ ಬಿಡ್ಲಿಲ್ಲ ಅಂದ್ರೆ ಅಲ್ಲಿ ನಂಗೆ ಆಸಕ್ತಿನೇ ಇಲ್ಲ, ಅಂಥಾ ನನ್ನನ್ನೇ ಬಾಯಿ ಮುಚ್ಕೊಂಡು, ಹಿಂದೆ ಇರೋ ಒಶೋನ ಆಗಾಗ ನೋಡ್ತಾ, ಈ ವ್ಯಕ್ತಿಯ ಮುಖ ನೋಡ್ತಾ ಸುಮ್ಮನೆ ಕೇಳಿಸಿಕೊಳ್ಳೋ ಹಾಗೆ ಮಾಡ್ತಿದ್ರಲ್ಲಾ! ಸಂಪತ್ ಏನು ಸುಮ್ಮಸುಮ್ಮನೆ ಹೇಳ್ತಾರಾ?
3 ದಿನ 3 ಕ್ಷಣದ ಹಾಗೆ ಕಳೀಲಿಲ್ಲ. ಮೈ ಮೂಳೆ, ಮಾಂಸಖಂಡ ಎಲ್ಲಾ ಸಡಿಲ ಆಗೋ ಥರ ಕುಣಿಸಿದ್ರು, ನಗಿಸಿದ್ರು, ಅಳಿಸಿದ್ರು, ಕಿರುಚಿಸಿದ್ರು. ಅಲ್ಲಿ ನಾನು ನಾನಾಗೆ ಏನು ಮಾಡ್ಲಿಲ್ಲ ಅಂದ್ರೆ ನಂಬ್ತೀರಾ? ಯಾಕೆ ಅಂತ ಹೇಳ್ತೀನಿ – ನಾನು ಜೀವನದಲ್ಲಿ ಬೇಕಾಬಿಟ್ಟಿ ಕುಣಿದವಳೇ ಅಲ್ಲ. ತೀರಾ ಶಿಸ್ತು ಬದ್ಧವಾಗಿ class ಗೆ ಹೋಗಿ, ಕಲಿತು dance ಮಾಡಬೇಕು ನಂಗೆ. ಇಲ್ಲಿ? ಅಬ್ಬಾ ಮೈ ಮರೆತು ಕುಣಿದಿದ್ದೀನಿ. ಯಾರಾದ್ರು ಮುಂದೆ ಅಳೋದು ಅಂದ್ರೆ ನಂಗೆ ಮರ್ಯಾದೆ ಹೋಗತ್ತೆ. ನಾನು ಅಳೋದು camera on ಆದಾಗ, ಏನು ತಮಾಷೆನ? ಅಳಿಸಿದ್ರಪ್ಪ… ಒಂದಷ್ಟು ವರ್ಷಗಳಿಗೆ ಆಗೋ ಅಷ್ಟು ಕಣ್ಣೀರು ಬಂದು ಖಾಲಿ ಆಯ್ತು. ಹೊಟ್ಟೆನೋವು ಇನ್ನು ಹೋಗಿಲ್ಲ – ಅಷ್ಟೊಂದು ನಗು. ಎಲ್ಲಾ ಮುಚ್ಕೊಂಡು – literally ಹಿಂದೆ-ಮುಂದೆ ಮುಚ್ಕೊಂಡು ಪ್ರಾಣಾಯಾಮ ಮಾಡಿಸಿದ್ರು.Breathing, Meditation… Just wow.
ಈ ಮೂರು ದಿನ ನಾನು ಒಬ್ಬಳೇ ಇದ್ದೆ. ಹೋದಲ್ಲೆಲ್ಲಾ friends!ಮಾಡಿಕೊಂಡು, ಅತಿಯಾಗಿ ಹಚ್ಕೊಂಡು ತಿರುಗೊ ನಾನು ಒಬ್ಬಳೇ ಇದ್ದೆ. ಊಟ, ತಿಂಡಿ, ನಿದ್ದೆ – ಯಾವಾಗ ಮಾಡಿದ್ನೋ ಏನೋ! ಒಂದು ಥರ ನಶೆ ಅದು. ಅಲ್ಲಿ ಬಂದಿರೋ ಎಲ್ಲರನ್ನೂ ಪ್ರೀತಿಸಿದೆ. ಯಾರಿಗೂ ವಿದಾಯ ಹೇಳದೇ ನನ್ನಷ್ಟಕ್ಕೆ ವಾಪಸ್ ಬಂದು ಬಿಟ್ಟೆ.
ಕೊನೆ ದಿನ, ಅಂದ್ರೆ ನಿನ್ನೆ conclusion ಇತ್ತು. ನಾನು ಕಣ್ಣಲ್ಲಿ ನೀರು ತುಂಬ್ಕೊಂಡು – ಅವರನ್ನೇ ನೋಡ್ತಾ ಇದ್ದೆ. ಈ ಮನುಷ್ಯ ನನ್ನ ತಿರುಗಿ ಕೂಡ ನೋಡ್ಲಿಲ್ಲ. ಪ್ರತಿದಿನ ದೂರದಿಂದ ನೋಡಿದ್ದು ಅಷ್ಟೇ. ಹತ್ತಿರ ಹೋಗಬೇಕು, ನಿಮ್ಮನ್ನ ಒಂದು ಸಾರಿ hug ಮಾಡ್ಲಾ ಅಂತ ಕೇಳಬೇಕು ಅನ್ನಿಸಿದ್ರೂ- ಊಹುಂ ಆಗ್ಲಿಲ್ಲ. ಸಂಕೋಚ ಅಂದ್ರೆ ಗೊತ್ತೆ ಇಲ್ದಿರೋ ನಾನು, ಯಾರಾದ್ರೂ ಇಷ್ಟ ಆದ್ರೆ ಹಿಂದೆ-ಮುಂದೆ ಯೋಚಿಸದೇ ತಬ್ಬಿಕೊಳ್ಳೋ ನಾನು ಆ ವ್ಯಕ್ತಿಯ ಹತ್ರ ಹೋಗ್ಲಿಲ್ಲ. ನೋಡಿದ ಕೂಡಲೆ “ವಾವ್ “ಅಂತ ಅನ್ನಿಸದೇ ಇರೋ ಈ ವ್ಯಕ್ತಿ, ಒಶೋ ಮತ್ತೆ ಬಂದಿರಬಹುದಾ ಅನ್ನೋ ಅಷ್ಟು ಜೀವಂತಿಕೆ ತುಂಬಿರೋ ಮನುಷ್ಯ. ವಿಪರ್ಯಾಸ ಅಂದ್ರೆ -ನನಗೆ ಅವರ ಹೆಸರೇ ಗೊತ್ತಿಲ್ದೆ ಇರೋದು. ವಾಪಸ್ ಬಂದ ಮೇಲೆ, online ನೋಡಿ, Instagram ಹುಡುಕಿ ಗೊತ್ತು ಮಾಡಿಕೊಂಡಿದ್ದು – “ವೇಣುಗೋಪಾಲ್”
ಒಶೋ ಸನ್ನಿಧಿಯಲ್ಲಿ ನಿಮಗೆ ಧೂಪ-ಪೂಜೆ-ಪುನಸ್ಕಾರ-ಕುಂಕುಮ- ಗಂಧ-ದೀಪ-ಆರತಿ ಏನು ಸಿಗೋದಿಲ್ಲ. ಆದರೆ ಅಲ್ಲಿ ನಾವೆಲ್ಲರೂ ಭಗವಂತ ಅಂತ ಕರೆಯೋ Energy ಇದೆ. Osho spiritual guru ಖಂಡಿತಾ ಹೌದು. ಇಷ್ಟೆಲ್ಲಾ ಆದ ಮೇಲೆ ಉಳಿದಿರೋ ಒಂದು ಪ್ರಶ್ನೆ -“ನನ್ನನ್ನ ಕರೆಸಿಕೊಳ್ಳೋದಕ್ಕೆ ಇಷ್ಟು ದಿನ ಬೇಕಿತ್ತಾ?
Leave a Reply